Sunday, December 28, 2008

ಶಿಶಿರದ ಬಣ್ಣಗಳು

ಬಹಳ ದಿನಗಳನಂತರ ನಮ್ಮ ಭೇಟಿ. ನಾನು ಭಾರತಕ್ಕೆ ಹೋಗುವ ಉದ್ದೇಶವನ್ನ ತೊರೆದು ಮತ್ತೆ ಬಾಡಿಗೆ ಮನೆಯನ್ನ ಹುಡುಕುವಂತೆ ಮಾಡಿದ ನಮ್ಮ ಮೇನೇಜರ. ಅದರಿಂದ ಬೀದಿ ಬೀದಿ ಅಳೆದಾಡಿ ಕೊನೆಗೆ ಮನೆಯನ್ನ ಹುಡುಕಿ, ಮನೆ ಬದಲಾಯಿಸುವಷ್ಟರಲ್ಲಿ ದೇವರ ದರ್ಶನವಾಯಿತು. ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕಿದ ಅನುಭವ ಬಹಳ ಸಹಾಯಕಾರಿ ಆಯಿತು. ಇಷ್ಟರಲ್ಲಿ ಚಲಿಗಾಲ ಬಂದೇ ಬಿಡ್ತು. ಬಣ್ಣ ಬಣ್ಣದ ಎಲೆಗಳೆಲ್ಲ ಉದುರಿ ಕಡ್ಡಿಗಳಂತೆ ನಿಂತ ಮರಗಳ ಮೇಲೆ ಮಂಜು ಬಿಳಿಯ ಹೂವುಗಳನ್ನ ಮೂಡಿಸಿತು. ಆ ಚಿತ್ರವನ್ನ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

DSCN2931 

DSCN2932DSCN2936

DSCN2938

DSCN2940

ಬಣ್ಣದ ಚಿತ್ತಾರದಂತೆ ಕಾಣುತ್ತಿರುವ ನಮ್ಮ ಹಳೆಯ ಮನೆಯ ಬೀದಿ.

DSCN2945

ನಮ್ಮ ಹೊಸ ಮನೆಯ ಕಿಟಿಕಿಯಿಂದ ಕಾಣುತ್ತಿರುವ ಮಂಜಿನ ಹೂಮಳೆ. ಮತ್ತೆ ಬೇಸಿಗೆಗಾಗಿ ಕಾಯಿವುದು ಬಿಟ್ಟರೆ ಮಾಡುವುದಾದರೂ ಏನು?

Sunday, October 5, 2008

ನಮ್ಮ ಮನೆಯ ಹತ್ತಿರದ ಆಪಿಲ್ ಮರ

ಇದು ನಮ್ಮ ಮನೆಯ ಹತ್ತಿರವಿರುವ ಆಪಿಲ್ ಮರದ ಛಾಯಾಚಿತ್ರ. ಸಾಧಾರಣವಾಗಿ ಇಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ  ಆಪಿಲ್ ತೋಟಕ್ಕೆ ಹೋಗಿ ಆಪಿಲ್ ಗಳನ್ನ ತರುವುದು ಅಭ್ಯಾಸ. ಆದರೆ ಈ ಬಾರಿ ನಮಗೆ ಹೋಗಲು ಆಗಲಿಲ್ಲ. ಅದರಿಂದ ಈ ಮರದಿಂದ ಆಪಿಲ್ ಗಳನ್ನ ಸಂಗ್ರಹಿಸಿ ಸಂತೋಷ ಪಟ್ಟೆವು.

apple1

ತೋಟದ ಮರಕ್ಕಾದರೆ ಗೊಂಚಲು ಗೊಂಚಲಾಗಿ ಇರುತ್ತವೆ.

apple2

Sunday, September 28, 2008

Marine Land ನೋಡೋಣ ಬణ్ణి

ಮೆರಿನ್ ಲ್ಯಾಂಡ್ ಎಂಬ ಈ ವಿಹಾರ ಸ್ಥಳ ನಯಾಗರಾ ಜಲಪಾತದ ಹತ್ತಿರವಿದೆ. ನಯಾಗರಾ ನೋಡಿದನಂತರ ತಪ್ಪದೇ ನೋಡಬೇಕಾದ ಸುಂದರ ಸ್ಥಳವಿದು. ಮಕ್ಕಳ ಮನರಂಜನೆಗಾಗಿ ಇಲ್ಲಿ ಬಗೆಬಗೆಯ ಆಟಗಳಿವೆ. ಇನ್ನು ದೊಡ್ಡವರಿಗಾಗಿ ಮೈ ಜುಮ್ಮೆನಿಸುವ ರೈಡ್ಸ್ ಗಳಿವೆ. ಎಲ್ಲಕ್ಕಿಂತ ಮಿಗಿಲಾಗಿ ಜಲಪ್ರಪಂಚದ ಅಚ್ಚರಿಗಳಾದ ಡಾಲ್ಫಿನ್ ಮೀನುಗಳು, ತಿಮಿಂಗಲಗಳು, ವಾಲ್ರಸ್, ಸೀಲ್ ಗಳನ್ನು ನೋಡ ಬಹುದು. ಅವುಗಳ ಕ್ರೀಡಾ ಪ್ರದರ್ಶನೆಯನ್ನ ಮರೆಯಲು ಸಾಧ್ಯವಿಲ್ಲ. ಇನ್ನೂ ಹೆಚ್ಚಿನ ವಿವರಗಳಿಗಾಗಿ ಈ ಪುಟವನ್ನ ನೋಡಿರಿ.

ಅಲ್ಲಿನ ಅನುಭವಗಳನ್ನ ಫೋಟೋಗಳಾಗಿ ಮತ್ತು ವೀಡಿಯೋಗಳ ರೂಪದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

DSCN2840 

ಇಲ್ಲಿ ತಿಮಿಂಗಲಗಳ ಪ್ರದರ್ಶನೆ ನಡೆಯುತ್ತದೆ. ನಿಗದಿತ ವೇಳೆಗಳಲ್ಲಿ ತಿಮಿಂಗಲಗಳ ಶಿಕ್ಷಕರು ಬಂದು ಪ್ರದರ್ಶನೆ ನೀಡಿಸುತ್ತಾರೆ.

DSCN2893

ಈ ಪ್ರದರ್ಶನೆಯಲ್ಲಿ ಒಂದು ಅಂಶವೇನೆಂದರೆ, ವೀಕ್ಷಕರ ಮೇಲೆ ನೀರು ಚಲ್ಲುವಂತೆ ತಿಮಿಂಗಲ ತನ್ನ ಬಾಲದಿಂದ ನೀರನ್ನು ಬಲವಾಗಿ ಬಡಿಯುವುದು. ಹೀಗೆ ನೀರನ್ನು ತನ್ನ ಬಾಲದಿಂದ ಬಡಿಯುತ್ತಿರುವ ತಿಮಿಂಗಲವನ್ನ ಮೇಲಿನ ಚಿತ್ರದಲ್ಲಿ ನೋಡಬಹುದು. ನೀರಿನಿಂದ ಮೇಲಕ್ಕೆ ಹಾರಿ ಗಿರಿಕಿ ಹೊಡೆಯುತ್ತಾ ಮತ್ತೆ ನೀರಿಗೆ ಬೀಳುವುದು ಮತ್ತೊಂದು ಮನರಂಜನೆಯ ಅಂಶ.

DSCN2842

ಪ್ರಸರ್ಶನೆಯನಂತರ ಆರಾಮಾಗಿ ಈಜುತ್ತಿರುವ ನಮ್ಮ ಗೆಳೆಯ.

DSCN2849

ಇಲ್ಲಿನ ನೀರಿನ ಕೊಳಗಳ ಪ್ರತ್ಯೇಕತೆ ಏನೆಂದರೆ, ಇವು ಎರೆಡು ಅಂತಸ್ತುಗಳಾಗಿ ನಿರ್ಮಿತವಾಗಿವೆ. ಮೇಲೆ ಸಾಧಾರಣ ಕೊಳದಂತೆ ಇದ್ದು, ಪ್ರದರ್ಶನೆಗೆ ಅನುಕೂಲವಾಗಿರುತ್ತವೆ. ಕೆಳಗಿನೆ ಅಂತಸ್ತು ಗಾಜಿನಿಂದ ನಿರ್ಮಿತವಾಗಿರುತ್ತದೆ. ಈ ಗಾಜಿನ ಮೂಲಕ ತಿಮಿಂಗಲಗಳ ಜೀವನವನ್ನ ಹತ್ತಿರದಿಂದ ಗಮನಿಸಬಹುದು. ಹಾಗೆ ತೆಗೆದ ಚಿತ್ರಗಳನ್ನ ಇಲ್ಲಿ ಇಡುತ್ತಿದ್ದೇನೆ.

DSCN2869

ಇದು ಬಿಳಿಯ ತಿಮಿಂಗಲ (Beluga Whale). ಇವು ಯಾವ ಪ್ರದರ್ಶನೆಯೂ ನೀಡಲಿಲ್ಲವಾದರೂ ನೋಡಲು ಸೋಜಿಗವೆನಿಸುತ್ತವೆ.

DSCN2872

DSCN2858

ಇನ್ನು ಯುವಜನರ ಮನರಂಜನೆಗಾಗಿ ಅನೇಕ ರೈಡ್ಸ್ ಇವೆ. ಇದು ಎಲ್ಲಾದಕ್ಕಿಂತ ಮುಖ್ಯವಾದದ್ದು. ಇದನ್ನ ಸ್ಕೈ ಸ್ಕ್ರೀಮರ್ ಎಂದು ಕರೆಯುತ್ತಾರೆ. ಇದನ್ನ ಹತ್ತಿ ಮೇಲಕ್ಕೆ ಹೋದರೆ, ಇಡೀ ನಯಾಗರಾ ಜಲಪಾತ ಕಾಣಿಸುತ್ತದೆಂದು ಹೇಳುತ್ತಾರೆ. ಆದರೆ ನಾವಂತೂ ಅದನ್ನ ನಿರ್ಧರಿಸಿಕೊಳ್ಳಲು ಆಗಲಿಲ್ಲ ಬಿಡಿ. ಯಾಕೆಂದರೆ ಅದನ್ನ ಹತ್ತುವ ಮುನ್ನ ಅದಿದ್ದ ಗುಡ್ಡವನ್ನ ಹತ್ತಬೇಕಾಗುವುದು. ನಮಗೆ ಅಷ್ಟು ಸಮಯವಿರಲಿಲ್ಲ. ನಮಗೆ ಡಾಲ್ಫಿನ್ ಪ್ರದರ್ಶನೆಗೆ ಸಮಯವಾಗುತ್ತಿರುವುದರಿಂದ ಮುನ್ನಡೆದೆವು. ಇದೊಂದಲ್ಲದೆ ಚಿಕ್ಕ ಮಕ್ಕಳಿಗೂ ಅನೇಕ ರೈಡ್ಸ್ ಗಳಿವೆ.

DSCN2879

DSCN2885

ಕೇವಲ ತಿಮಿಂಗಲಲ್ಲದೇ ಕರಡಿಗಳು, ಜಿಂಕೆಗಳು ಕೂಡಾ ಇವೆ. ಇಲ್ಲಿ ಜಿಂಕೆಗಳನ್ನ ಮುಟ್ಟುವುದಲ್ಲದೇ ಅವುಗಳಿಗೆ ಆಹಾರವನ್ನೂ ನೀಡಬಹುದು.

DSCN2903

ಇದು ಮರಿನ್ ಲ್ಯಾಂಡಿನ ಅತಿ ಮುಖ್ಯ ಆಕರ್ಷಣೆ. ಇದುವೇ ಕಿಂಗ್ ವಡಾರ್ಫ್ ಕ್ರಿಡಾಂಗಣ. ಡಾಲ್ಪಿನ್ ಗಳ ಪ್ರದರ್ಶನಾ ಸ್ಥಳ. ಬರೀ ಡಾಲ್ಫಿನ್ಗಳು ಮಾತ್ರವಲ್ಲದೇ  ಸೀಲ್ಸ್, ವಾಲ್ರಸಗಳು ಪ್ರದರ್ಶನೆಯಲ್ಲಿ ಭಾಗವಹಿಸುತ್ತವೆ.

DSCN2908

DSCN2923

ಇಲ್ಲಿ ಈ ಪ್ರದರ್ಶನೆಯ ವೀಡಿಯೋಗಳನ್ನ ಇಡುತ್ತಿದ್ದೇನೆ. ಇವುಗಳ ಗಾತ್ರ ಹೆಚ್ಚಿಗಿರುವುದರಿಂದ ಲೋಡ್ ಆಗುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಅದಕ್ಕೆ ನನ್ನ ಕ್ಷಮಾಪಣೆಗಳು.

ನೋಡಲು ಬಂದ ಪ್ರೇಕ್ಷಕರಿಂದ ಒಂದು ಮಗುವನ್ನ ಕರೆದು, ಆ ಮಗುವಿನೊಡನೆ ಒಂದು ಡಾಲ್ಫಿನ್ಗೆ ಸೂಚನೆಗಳನ್ನ ನೀಡಿಸಿ ಅದರೊಡನೆ ಕೆಲವು ಅಂಶಗಳನ್ನ ಪ್ರದರ್ಶಿಸುತ್ತಾರೆ. ಇದಾದನಂತರ ಆ ಮಗುವಿಗೆ ಒಂದು ಡಾಲ್ಫಿನ ಆಕಾರದ ಬಲೂನು ಕೊಡುತ್ತಾರೆ.

 

 

ಸಂಜೆಯವರಿಗೆ ಹೀಗೆ ಎಲ್ಲಾ ಪ್ರದರ್ಶನೆಗಳನ್ನ ನೋಡಿ, ಮನೆಗೆ ಹಿಂದಿರುಗೆದೆವು. ಅಂತೂ ನಮ್ಮ ಈ ವಿಹಾರ ಯಾತ್ರೆ ಹೇಗಿದೆಯೆಂದು ಹೇಳುತ್ತಿರಲ್ಲಾ

Sunday, September 14, 2008

ಮತ್ತೊಮ್ಮೆ ನಯಾಗರಾ ದರ್ಶನ

ಕಳೆದ ತಿಂಗಳಲಲ್ಲಿ ೩ ದಿನ ರಜೆ ಕೂಡಿ ಬಂದಿರುವುದರಿಂದ ನನ್ನ ಕೆನಡಾ ಪ್ರವಾಸದಲ್ಲಿ ಮೂರನೇ ಬಾರಿ ನಯಾಗರಾ ಜಲಪಾತವನ್ನ ನೋಡುವ ಭಾಗ್ಯ ಸಿಕ್ಕಿತು. ಅನಂತ ಜಲರಾಶಿ ಭೋರ್ಗೆರೆಯುತ್ತಾ ನೆಲಕ್ಕೆ ಜಾರುವ ಸಂಭ್ರಮ ನಿಮ್ಮೊಡನೆ ಹಂಚಿಕೊಳ್ಳುವ ಆಶೆಯಿಂದ ಈ ಪುಟ ಬರೆಯುತ್ತಿದ್ದೇನೆ.

DSCN2736

ಇದು ಕೆನಡಾ ಭೂಭಾಗದಲ್ಲಿರುವ ನಯಾಗರಾ ಜಲಪಾತ. ಇದನ್ನ ಲಾಳ (Horse shoe) ಜಲಪಾತವೆಂದೂ ಕರೆಯುತ್ತಾರೆ. ಇದನ್ನ ನೌಕೆಯನ್ನು ಹತ್ತಿ ಹತ್ತಿರದಿಂದ ನೋಡುವ ವ್ಯವಸ್ಥೆಯಿದೆ.

DSCN2739

ಇದು ಅಮೆರಿಕಾ ದೇಶಕ್ಕೆ ಸೇರಿದ ಜಲಪಾತ. ಅಮೆರಿಕಾ ಪ್ರಜೆ ಈ ಜಲಪಾತದ ಪಕ್ಕದಿಂದ ಇಳಿಯುತ್ತಾ ನೋಡುವ ಅವಕಾಶವಿದೆ.

DSCN2751

ನೌಕೆಯಿಂದ ಲಾಳ ಜಲಪಾತದತ್ತ ಸಾಗುತ್ತಾ ಅಮೆರಿಕಾದ ಜಲಪಾತವನ್ನ ಫೋಟೋ ತೆಗೆದಿದ್ದೇನೆ. ಜಲಪಾತದಿಂದ ಹರಡಿದ ನೀರಿನ ಹನಿಗಳಲ್ಲಿ ಸುಂದರ ಕಾಮನಬಿಲ್ಲು ಮೂಡುತ್ತದೆ. ಇದು ನೋಡಲು ಬಹು ಚಂದ.

DSCN2753

ಜಲಪಾತವನ್ನ ಹತ್ತಿರದಿಂದ ನೋಡುತ್ತಾ  ಆನಂದಪಡುತ್ತಿರುವ ಅಮೆರಿಕಾದ ಜನ ಜಂಗುಳ.

DSCN2756

ಈಗ ಲಾಳ ಜಲಪಾತದ ಹತ್ತಿರ ಸೇರುತ್ತಿರುವ ನಮ್ಮ ನೌಕೆ. ನೌಕೆ ಎಷ್ಟು ಹತ್ತಿರ ಹೋಗುತ್ತದೆಂದರೆ, ಜಲಪಾತ ನಮ್ಮ ಮೇಲೆಯೇ ದುಮುಕುತ್ತಿದೆಯೇನೋ ಅನಿಸುತ್ತದೆ.

DSCN2763

ಜಲಪಾತದಿಂದ ಎಗಿರಿದ ನೀರಿನ ಹನಿಗಳು ನಮ್ಮ ಮೇಲೆ ಮಳೆಯಂತೆ ಸುರಿಯುತ್ತವೆ. ಅದಕ್ಕಾಗಿಯೇ ನಮಗೆಲ್ಲಾ plastic rain coats ಕೊಡುತ್ತಾರೆ. ಮೂರುಕಡೆಯಿಂದ ಆವರಿಸಿದ, ಭೋರ್ಗೆರೆಯುತ್ತಿರುವ ಅನಂತ ಜಲರಾಶಿಯನ್ನ ಬಣ್ಣಿಸಲು ಸಾಧ್ಯವಿಲ್ಲ. ಅಂಥಾ ಆನುಭೂತಿಯನ್ನ ಸವಿಯುತ್ತಿರುವ ನಮ್ಮ ಸಹ ಪಯನಿಗರು.

DSCN2776

DSCN2777

ಲಾಳೆಯ ಆಕಾರದಲ್ಲಿರುವ ಅಗಾಧದಲ್ಲಿ ದುಮುಕುತ್ತಿರುವ ಜಲರಾಶಿ. ಇದನ್ನೇ ನಾವು ನೌಕೆಯ ಮೂಲಕ ಹತ್ತಿರದಿಂದ ನೋಡಿದ್ದು.

DSCN2790

ಕತ್ತಲಾಗುತ್ತಿದ್ದಂತೆಯೇ ಜಲಪಾತದ ಮೇಲೆ ಬಣ್ಣಬಣ್ಣದ ಕಾಂತಿಯನ್ನ ವಿದ್ಯುದ್ದೀಪಗಳ ಮೂಲಕ ಪ್ರಸರಿಸುತ್ತಾರೆ. ರಂಗು ರಂಗಾಗಿ ಮೆರೆಯುತ್ತಿರುವ ನಯಾಗರಾ ಜಲಪಾತ. ಬಣ್ಣಗಳನ್ನ ಬದಲಿಸುತ್ತಿದ್ದಂತೆಯೇ ಜಲಪಾತ ಬಗೆಬಗೆಯ ಸೊಬಗನ್ನ ತೋರುತ್ತಾ ಮತ್ತೆ ಬರಲು ಕರೆಯುತ್ತಿದೆಯನಿಸುತ್ತೆ.

DSCN2792

DSCN2812

ಜಲಪಾತದ ಹತ್ತಿರವಿರುವ ಸ್ಕೈಲಾನ್ ಮಿನಾರದಿಂದ ಕಾಣಿಸುವ ನಯಾಗರಾ.

DSCN2819

DSCN2830

ನಿಮ್ಮ ಅನಿಸಿಕೆಗಳನ್ನ ತಪ್ಪದೆ ತಿಳಿಸಿ.

Sunday, May 11, 2008

ವಸಂತಕಾಲ ಬಂದಾಗ

ವಸಂತಕಾಲ ಬಂದಾಗ ಮಾವು ಚಿಗುರಲೇಬೇಕು. ಕೋಗಿಲೆ ಹಾಡಲೇಬೇಕು. ಅವುಗಳನ್ನ ನೋಡುವ ಭಾಗ್ಯ ನಮ್ಮಂತಾ ಪರದೇಶದಲ್ಲಿರುವವರಿಗಿಲ್ಲ ಬಿಡಿ. ಆದರೇ ನೋಡುತ್ತಿದ್ದಂತೆಯೇ ಮಂಜಿನ ಬಿಳಿಯ ಬಣ್ಣ ಕರಿಗಿ ಹಸಿರು ವರ್ಣ ಹೊದಿಸಿಕೊಂಡ ಪ್ರಕೃತಿಯು ಯಾವ ದೇಶದ್ದಾದರೂ ನೋಡಲು ಚಂದತಾನೆ. ಬೇಸಿಗೆಗಾಗಿ ಕಾಯಿತ್ತಿರುವ ಮಕ್ಕಳು ಬಣ್ಣದ ಚಿಟ್ಟೆಗಳಂತೆ ಹೊರಬಂದು ಚಿಳಿಪಿಳಿಸುವುದು ನೋಡಲೇ ಬೇಕಾದ ಸುಂದರ ದೃಶ್ಯ. ಬಣ್ಣ ಬಣ್ಣದ ಹೂವುಗಳನ್ನು ಹೊತ್ತು ತಮಗೆ ಮರುಜೀವ ತಂದ ವಸಂತಕ್ಕೆ ಪೂಜಿಸುವಂತೆ ನಿಂತ ಮರಗಳು, ಭೋರ್ಗೆರೆಯುವ ನದಿಗಳ ಮಂಜುಳ ಧ್ವನಿ ಕೇಳಲೇಬೇಕು. ಇದ್ದನ್ನ ತಮ್ಮೊಂದಿಗೆ ಹಂಚಿಕೊಳ್ಳುವ ಭಾಗ್ಯ ನನ್ನದಲ್ಲವೇ?

blog1

ಮಂಜೆಲ್ಲಾ ಕರಿಗಿಹೋದನಂತರ ವಿಶಾಲವಾಗಿ ಕಾಣುತ್ತಿರುವ ನಮ್ಮ ಬೇದಿ.blog2

ನಮ್ಮ ಮನೆಯೆದುರು ಇರುವ ಕಾಡು ನಿದಾನವಾಗಿ ಹಸಿರಾಗುತ್ತಿರುವುದು.

Sunday, April 20, 2008

ಬೆಂಗಳೂರಿನಲ್ಲಿ ಮಕ್ಕಳಿಗೆ ಉಚಿತ ಹೃದಯ ಚಿಕೆತ್ಸೆ

ಬೆಂಗಳೂರಿನ whitefieldನಲ್ಲಿರುವ ಶ್ರೀ ಸತ್ಯಸಾಯಿ ಆಸ್ಪತ್ರೆಯವರು ಮಕ್ಕಳಿಗೆ ಉಚಿತವಾಗಿ ಹೃದಯ ಶಸ್ತ್ರಚಿಕೆತ್ಸೆ ಮಾಡಲಾಗುವುದು ಎಂದು ಪ್ರಕಟಿಸಿದ್ದಾರೆ. ಅದರ ಜಾಹಿರಾತನ್ನು ಇಲ್ಲಿ ನಾನು ನೀಡುತ್ತಿದ್ದೇನೆ. ನಿಮಗೆ ತಿಳಿದವರಿಗೆ ಇದನ್ನು forward ಮಾಡಿ. ಅವಸರದಲ್ಲಿರುವವರಿಗೆ ಉಪಯೋಗವಾಗಬಹುದು.

heart1

Sunday, April 6, 2008

ಯುಗಾದಿ ಹಬ್ಬದ ಶುಭಾಶಯಗಳು

ಎಲ್ಲರಿಗು ಯುಗಾದಿ ಹಬ್ಬದ ಶುಭಾಶಯಗಳು. ಇ ಬಾರಿಯ ಯುಗಾದಿ ಕನ್ನಡ ರಾಜ್ಯಕ್ಕೆ ಒಂದು ಸ್ಥಿರ ಸರ್ಕಾರ ಕೊಡಲೆಂದು ಬಯಸುತ್ತಿದ್ದೇನೆ. ಜನರಲ್ಲಿ ಒಳ್ಳೆಯತನವನ್ನ ಹೆಚ್ಚಿಸಲೆಂದು, ಎಲ್ಲರ ಬಾಳು ಬಂಗಾರವಾಗಲೆಂದು ಹಾರೈಸುತ್ತಿದ್ದೇನೆ.

Sunday, March 16, 2008

Yahoo messenger, Google talkನಲ್ಲಿ ಕನ್ನಡದಲ್ಲಿ ಬರೆಯುವುದು ಹೇಗೆ?

Yahoo messenger ಮತ್ತು Google talkನಲ್ಲಿ ಕನ್ನಡದಲ್ಲಿ ಸಂದೇಶ ಬರೆಯಬೇಕೆನ್ನುವ ಆಶೆ ಇರುವವರಿಗೆ ಇದೊಂದು ದಾರಿ. ಈ ರೀತಿಯಲ್ಲಿ ಸಂದೇಶಗಳು ಬರೆಯುವುದು ಸ್ವಲ್ಪ ಕಷ್ಟದ ವಿಷಯವಾದರೂ ನಮ್ಮ ಮನಸಿನ ಮಾತನ್ನು ನಮ್ಮ ಮಾತೃಭಾಷೆಯಲ್ಲೇ ಬರೆಯುವುದು ಸುಲಭವಲ್ಲವೇ? ಇದಕ್ಕಿಂತ ಉತ್ತಮ, ಸುಲಭದ ದಾರಿಯಿದ್ದರೆ ದಯವಿಟ್ಟು ನನಗೆ ತಿಳಿಸಿ.

ನಾವು ಕನ್ನಡದಲ್ಲಿ ಬರೆಯಬೇಕಾದ ಸಂದೇಶವನ್ನು ಈ websiteನಲ್ಲಿ (http://www.google.com/transliterate/indic/Kannada) ಬರೆದು, ಅದನ್ನ yahoo messenger ಅಥವ google talkನ ಸಂದೇಶ ಕಳುಹಿಸುವ ಸ್ಥಳದಲ್ಲಿ ಅಂಟಿಸಿದರೇ ನಮ್ಮ ಸಂದೇಶ ಕನ್ನಡದಲ್ಲೇ ಪ್ರಸಾರವಾಗುತ್ತದೆ.

Google transliterateನಲ್ಲಿ ಬರೆಯುವುದು ಬರಹದಲ್ಲಿ ಬರೆದಷ್ಟು ಸುಲಭ. ನಿಮ್ಮಲ್ಲಿ ಬರಹದ IME ಇದ್ದರೆ ನೀವು notepadನಲ್ಲಿ ಕೂಡಾ ಬರೆದು ಅದನ್ನ messenger ಸಂದೇಶ ಕಳುಹಿಸುವ ಸ್ಥಳದಲ್ಲಿ ಅಂಟಿಸಿ ಕಳುಹಿಸಬಹುದು.

ಇನ್ನು ನಾವು ಕನ್ನಡದಲ್ಲೇ ಮಾತನಾಡಬಹುದು. ಏನಂತಿರಾ?

Thursday, March 13, 2008

ಮಂಜಿನ ರಾಶಿ

ನಮ್ಮ ಊರಿನಲ್ಲಿ ಕಳೆದ ಭಾನುವಾರ ಮಂಜಿನ ರಾಶಿಯೇ ತುಂಬಿಕೊಂಡಿತ್ತು. ಅದನ್ನು ನಿಮಗಾಗಿ ಛಾಯಾಚಚಿತ್ರಗಳಾಗಿ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ನೋಡಿ ಹೇಗಿದೆಯೆಂದು ಹೇಳಿ.













ಇದು ನಮ್ಮ ಮನೆಯ ಸುತ್ತುಮುತ್ತ ಆವರಿಸಿಕೊಂಡಿರುವ ಕಾಡು ಮಂಜಿನ ಮಳೆಯನಂತರ ಹೀಗೆ ಕಾಣುತ್ತಿತ್ತು.




























ಇದು ನಮ್ಮ ಮನೆಯಿರುವ ಮಹಡಿ.