ಎಲ್ಲಾ ಕನ್ನಡ ಬಾಂಧವರಿಗೆ ನನ್ನ ವಂದನೆಗಳು.
ನನ್ನ ಹೆಸರು ರಾಜಶೇಖರ. ನಾನು ಬಹಳ ದಿನಗಳಿಂದ ಕನ್ನಡದಲ್ಲಿ ಬರೆಯಬೇಕೆಂದು ಸಮಯ ಕಾಯುತ್ತಿದ್ದೆ. ಅಂತೂ ಈಗ ಕಾಲ ಒದಗಿಬಂತು. ನನ್ನ ನಿವಾಸ ಬೆಂಗಳೂರು ಹಾಗೂ ಕೆನಡಾ ದೇಶದ ಮಾಂಟ್ರಿಯಾಲ್ ನಗರ. ಬೆಂಗಳೂರಿನಲ್ಲಿ ಸ್ವಲ್ಪ ದಿನಗಳಿದ್ದರೆ ಉಳಿದ ಎಲ್ಲಾ ದಿನಗಳು ಕೆನಡಾದಲ್ಲೇ ಕಳೆಯಬೇಕು. ಇದು ನನ್ನ ಉದ್ಯೋಗದ ಪರಿ. ಭಾರತಕ್ಕೆ ದೂರವಿದ್ದ ಮಾತ್ರಕ್ಕೆ ನನಗೆ ದೇಶದಬಗ್ಗೆ ಕಾಳಜಿ ಇಲ್ಲವೆಂದು ತಿಳಿಯಬೇಡಿ. ವಾರ್ತಾ ಪತ್ರಿಕೆಗಳ ಮೂಲಕ ನಾನು ಸಂಪರ್ಕದಲ್ಲಿದ್ದೇನೆ.
ಸರಿ ಹಾಗಾದರೆ, ಮತ್ತೆ ಭೇಟಿಯಾದಾಗ ಮತ್ತಷ್ಟು. ನಿಮ್ಮ ಅನಿಸಿಕೆಗಳು ಬರೆಯುತ್ತಿರಿ.