Showing posts with label ಕನ್ನಡ. Show all posts
Showing posts with label ಕನ್ನಡ. Show all posts

Friday, January 31, 2014

ಲಾಲ್ ಬಾಗಿನ ಪುಷ್ಪ ಪ್ರದರ್ಶನ

ಲಾಲ್ ಬಾಗ್ ನಲ್ಲಿ ಪ್ರತಿ ವರ್ಷ ಎರಡು ಬಾರಿ ಫಲ ಪುಷ್ಪ ಪ್ರದರ್ಶನವನ್ನ ಏರ್ಪಡಿಸಲಾಗುತ್ತದೆ. ಈ ವರ್ಷ ಗಣತಂತ್ರ ದಿನದ ಪ್ರಯುಕ್ತ ಪ್ರದರ್ಶನೆ ಆಯೋಜಿಸಲಾಗಿತ್ತು. ಬಗೆ ಬಗೆಯ ಹೂವುಗಳ ರಾಶಿಯನ್ನ ವಿವಿಧ ತರಕಾರಿ, ಹಣ್ಣುಗಳ ಆಕಾರದಲ್ಲಿ ಅಲಂಕರಿಸಲಾಗಿತ್ತು. ನಾವು ಅದನ ಕಂಡು ಸಂಭ್ರಮ ಪಟ್ಟೆವು. ಅವುಗಳ photos ಇಲ್ಲಿ ನೋಡಿ.

DSCN0093

DSCN0100 

DSCN0101

DSCN0108

DSCN0130

DSCN0147 DSCN0144

DSCN0170

DSCN0248 DSCN0247

Technorati Tags: ,

ಇನ್ನಷ್ಟು ನೋಡಲು ಕೆಳಗಿನ lik ಮೂಲಕ album ನೋಡಿ. ನಿಮ್ಮ ಅನಿಸಿಕೆಗಳನ್ನ ನನ್ನ ಜೊತೆ ಹಂಚಿಕೊಳ್ಳಿ.

Album link

ಧನ್ಯವಾದಗಳು.

Sunday, February 22, 2009

ಮಂಜಿನ ಹೋಟೆಲ್ - ೧

ಕಳೆದ ಶನಿವಾರ ನಾವು ಕ್ವೀಬೆಕ ನಗರವನ್ನ ಸಂದರ್ಶಿಸಿದೆವು. ವಿಶೇಷವೇನೆಂದರೆ ಮಂಜಿನಲ್ಲೇ ಕಟ್ಟಿದ ಹೋಟೆಲ್ ಮತ್ತು ಶೀತಾಗಾಲದ ಜಾತರೆ. ಅವುಗಳ ಚಿತ್ರಗಳನ್ನ ನಿಮ್ಮೊಂದಿಗೆ ಹಂಚಿಕೊಳ್ಳಲು ಇಲ್ಲಿ ಇಡುತ್ತಿದ್ದೇನೆ.

ಮಂಜಿನ ಹೋಟೆಲ್ಲನ್ನ ಕೇವಲ ಮಂಜಿನ ರಾಶಿಯಿಂದ ನಿರ್ಮಿಸುತ್ತಾರೆ. ಇದರ ನಿರ್ಮಾಣದಲ್ಲಿ ಬೇರೇ ಯಾವ ಪದಾರ್ಥದ ಬಳಿಕೆ ಇರುವುದಿಲ್ಲ. ಚಿಲಿಗಾಲದಲ್ಲಿ ವಾತಾವರಣ ಅನುಕೂಲಿಸಿದಾಗ ಪ್ರತಿ ವರ್ಷ ಹೊಸ ಬಗೆಯ ಥೀಂಗಳನ್ನ ಆಧಾರಿಸಿ ಇಂಥಾ ಹೋಟೆಲುಗಳನ್ನ ನಿರ್ಮಿಸುತ್ತಾರೆ. ಇಂಥ ಮಂಜಿನ ಹೋಟೆಲ್ ಗಳು ವಿಶ್ವದಲ್ಲಿ ಕೇವಲ ಎರೆಡುಕಡೆ ನಿರ್ಮಿತಗೊಳ್ಳುತ್ತವೆಂದು ನಮ್ಮ ಮಾರ್ಗದರ್ಶಿ ತಿಳಿಸಿದ. ಕ್ವೀಬೆಕ್ ನಗರದ ಅಯಿಸ್ ಹೋಟೆಲ್ಲಿನಲ್ಲಿ ತಂಗುವುದು ಬಹಳ ದುಬಾರಿ ವ್ಯವಹಾರ. ಒಬ್ಬನಿಗೆ ಇಲ್ಲಿ ಒಂದು ರಾತ್ರಿ ಕಳೆಯಲು 300 ಡಾಲರು ಖರ್ಚಾಗುತ್ತದಂತೆ. ಆದರೂ ಅಷ್ಟು ಹಣ ಕೊಟ್ಟು ಮಂಜಿನ ದಿಮ್ಮೆಯ ಮೇಲೆ ಮಲುಗಲು ಬಹಳ ಜನ ಉತ್ಸಾಹಿಗಳು ಮುಂದಾಗುತ್ತಾರೆ. ಈ ವರ್ಷಕ್ಕೆ ಹೋಟೆಲ್ಲಿನ ಎಲ್ಲಾ ಕೋಣೆಗಳು ಕಾದರಿಸಲಾಗಿದೆಯಂತೆ.

DSCN2985

ಈ ಮಂಜಿನ ಹೋಟೆಲ್ಲಿನಲ್ಲಿ ಒಟ್ಟು 40 ಕೋಣೆಗಳಿವೆ. ಕೆಲವು ಕೋಣೆಗಳಲ್ಲಿ ಗೋಡೆಗಳ ಮೇಲೆ ಕೆತ್ತಿದ ಚಿತ್ರಗಳಿವೆ. ಆದರೆ ಸಾಧರಣ ಕೋಣೆಗಳಲ್ಲಿ ಇಂಥ ಚಿತ್ರಗಳು ಕಂಡುಬರುವುದಿಲ್ಲ. ಅವುಗಳಲ್ಲಿ ಕೇವಲ ಮಂಜಿನ ಮಂಚ, ಮೇಜು, ಕುರ್ಚಿಗಳಿರುತ್ತವೆ.

DSCN2995

DSCN2986

ಮಂಚ ಕೂಡಾ ಮಂಜಿನದೇ. ಆದರೆ ಅವುಗಳಮೇಲೆ ಹಾಸಿಗೆಗಳು ಮಾತ್ರ ಮಾಮೂಲಿನವು.

DSCN2989

DSCN2982

DSCN2999

DSCN3006

ಹೋಟೆಲ್ಲಿನ ಹಾಲ್.

DSCN3005

ಹಾಲಿನ ನಡುವೆ ತೂಗಾಡಿತ್ತುರುವ ದೀಪದ ಗುತ್ತಿ. ಇದು ಬಣ್ಣ ಬಣ್ಣದ ಕಾಂತಿ ಹರುಡುತ್ತಾ ಬೆಳಗುತ್ತದೆ. ನೀವೇ ನೋಡಿ ಕೆಳಗಿನ ವೀಡಿಯೋದಲ್ಲಿ.

ಉಳಿದ ಚಿತ್ರಗಳನ್ನೆ ಮುಂದಿನ ಭಾಗದಲ್ಲಿ. ಅಂತೂ ಹೇಗಿದೆ ನಮ್ಮ ಮಂಜಿನ ಹೋಟೆಲ್?

Sunday, October 5, 2008

ನಮ್ಮ ಮನೆಯ ಹತ್ತಿರದ ಆಪಿಲ್ ಮರ

ಇದು ನಮ್ಮ ಮನೆಯ ಹತ್ತಿರವಿರುವ ಆಪಿಲ್ ಮರದ ಛಾಯಾಚಿತ್ರ. ಸಾಧಾರಣವಾಗಿ ಇಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ  ಆಪಿಲ್ ತೋಟಕ್ಕೆ ಹೋಗಿ ಆಪಿಲ್ ಗಳನ್ನ ತರುವುದು ಅಭ್ಯಾಸ. ಆದರೆ ಈ ಬಾರಿ ನಮಗೆ ಹೋಗಲು ಆಗಲಿಲ್ಲ. ಅದರಿಂದ ಈ ಮರದಿಂದ ಆಪಿಲ್ ಗಳನ್ನ ಸಂಗ್ರಹಿಸಿ ಸಂತೋಷ ಪಟ್ಟೆವು.

apple1

ತೋಟದ ಮರಕ್ಕಾದರೆ ಗೊಂಚಲು ಗೊಂಚಲಾಗಿ ಇರುತ್ತವೆ.

apple2

Sunday, September 14, 2008

ಮತ್ತೊಮ್ಮೆ ನಯಾಗರಾ ದರ್ಶನ

ಕಳೆದ ತಿಂಗಳಲಲ್ಲಿ ೩ ದಿನ ರಜೆ ಕೂಡಿ ಬಂದಿರುವುದರಿಂದ ನನ್ನ ಕೆನಡಾ ಪ್ರವಾಸದಲ್ಲಿ ಮೂರನೇ ಬಾರಿ ನಯಾಗರಾ ಜಲಪಾತವನ್ನ ನೋಡುವ ಭಾಗ್ಯ ಸಿಕ್ಕಿತು. ಅನಂತ ಜಲರಾಶಿ ಭೋರ್ಗೆರೆಯುತ್ತಾ ನೆಲಕ್ಕೆ ಜಾರುವ ಸಂಭ್ರಮ ನಿಮ್ಮೊಡನೆ ಹಂಚಿಕೊಳ್ಳುವ ಆಶೆಯಿಂದ ಈ ಪುಟ ಬರೆಯುತ್ತಿದ್ದೇನೆ.

DSCN2736

ಇದು ಕೆನಡಾ ಭೂಭಾಗದಲ್ಲಿರುವ ನಯಾಗರಾ ಜಲಪಾತ. ಇದನ್ನ ಲಾಳ (Horse shoe) ಜಲಪಾತವೆಂದೂ ಕರೆಯುತ್ತಾರೆ. ಇದನ್ನ ನೌಕೆಯನ್ನು ಹತ್ತಿ ಹತ್ತಿರದಿಂದ ನೋಡುವ ವ್ಯವಸ್ಥೆಯಿದೆ.

DSCN2739

ಇದು ಅಮೆರಿಕಾ ದೇಶಕ್ಕೆ ಸೇರಿದ ಜಲಪಾತ. ಅಮೆರಿಕಾ ಪ್ರಜೆ ಈ ಜಲಪಾತದ ಪಕ್ಕದಿಂದ ಇಳಿಯುತ್ತಾ ನೋಡುವ ಅವಕಾಶವಿದೆ.

DSCN2751

ನೌಕೆಯಿಂದ ಲಾಳ ಜಲಪಾತದತ್ತ ಸಾಗುತ್ತಾ ಅಮೆರಿಕಾದ ಜಲಪಾತವನ್ನ ಫೋಟೋ ತೆಗೆದಿದ್ದೇನೆ. ಜಲಪಾತದಿಂದ ಹರಡಿದ ನೀರಿನ ಹನಿಗಳಲ್ಲಿ ಸುಂದರ ಕಾಮನಬಿಲ್ಲು ಮೂಡುತ್ತದೆ. ಇದು ನೋಡಲು ಬಹು ಚಂದ.

DSCN2753

ಜಲಪಾತವನ್ನ ಹತ್ತಿರದಿಂದ ನೋಡುತ್ತಾ  ಆನಂದಪಡುತ್ತಿರುವ ಅಮೆರಿಕಾದ ಜನ ಜಂಗುಳ.

DSCN2756

ಈಗ ಲಾಳ ಜಲಪಾತದ ಹತ್ತಿರ ಸೇರುತ್ತಿರುವ ನಮ್ಮ ನೌಕೆ. ನೌಕೆ ಎಷ್ಟು ಹತ್ತಿರ ಹೋಗುತ್ತದೆಂದರೆ, ಜಲಪಾತ ನಮ್ಮ ಮೇಲೆಯೇ ದುಮುಕುತ್ತಿದೆಯೇನೋ ಅನಿಸುತ್ತದೆ.

DSCN2763

ಜಲಪಾತದಿಂದ ಎಗಿರಿದ ನೀರಿನ ಹನಿಗಳು ನಮ್ಮ ಮೇಲೆ ಮಳೆಯಂತೆ ಸುರಿಯುತ್ತವೆ. ಅದಕ್ಕಾಗಿಯೇ ನಮಗೆಲ್ಲಾ plastic rain coats ಕೊಡುತ್ತಾರೆ. ಮೂರುಕಡೆಯಿಂದ ಆವರಿಸಿದ, ಭೋರ್ಗೆರೆಯುತ್ತಿರುವ ಅನಂತ ಜಲರಾಶಿಯನ್ನ ಬಣ್ಣಿಸಲು ಸಾಧ್ಯವಿಲ್ಲ. ಅಂಥಾ ಆನುಭೂತಿಯನ್ನ ಸವಿಯುತ್ತಿರುವ ನಮ್ಮ ಸಹ ಪಯನಿಗರು.

DSCN2776

DSCN2777

ಲಾಳೆಯ ಆಕಾರದಲ್ಲಿರುವ ಅಗಾಧದಲ್ಲಿ ದುಮುಕುತ್ತಿರುವ ಜಲರಾಶಿ. ಇದನ್ನೇ ನಾವು ನೌಕೆಯ ಮೂಲಕ ಹತ್ತಿರದಿಂದ ನೋಡಿದ್ದು.

DSCN2790

ಕತ್ತಲಾಗುತ್ತಿದ್ದಂತೆಯೇ ಜಲಪಾತದ ಮೇಲೆ ಬಣ್ಣಬಣ್ಣದ ಕಾಂತಿಯನ್ನ ವಿದ್ಯುದ್ದೀಪಗಳ ಮೂಲಕ ಪ್ರಸರಿಸುತ್ತಾರೆ. ರಂಗು ರಂಗಾಗಿ ಮೆರೆಯುತ್ತಿರುವ ನಯಾಗರಾ ಜಲಪಾತ. ಬಣ್ಣಗಳನ್ನ ಬದಲಿಸುತ್ತಿದ್ದಂತೆಯೇ ಜಲಪಾತ ಬಗೆಬಗೆಯ ಸೊಬಗನ್ನ ತೋರುತ್ತಾ ಮತ್ತೆ ಬರಲು ಕರೆಯುತ್ತಿದೆಯನಿಸುತ್ತೆ.

DSCN2792

DSCN2812

ಜಲಪಾತದ ಹತ್ತಿರವಿರುವ ಸ್ಕೈಲಾನ್ ಮಿನಾರದಿಂದ ಕಾಣಿಸುವ ನಯಾಗರಾ.

DSCN2819

DSCN2830

ನಿಮ್ಮ ಅನಿಸಿಕೆಗಳನ್ನ ತಪ್ಪದೆ ತಿಳಿಸಿ.

Thursday, March 13, 2008

ಮಂಜಿನ ರಾಶಿ

ನಮ್ಮ ಊರಿನಲ್ಲಿ ಕಳೆದ ಭಾನುವಾರ ಮಂಜಿನ ರಾಶಿಯೇ ತುಂಬಿಕೊಂಡಿತ್ತು. ಅದನ್ನು ನಿಮಗಾಗಿ ಛಾಯಾಚಚಿತ್ರಗಳಾಗಿ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ನೋಡಿ ಹೇಗಿದೆಯೆಂದು ಹೇಳಿ.













ಇದು ನಮ್ಮ ಮನೆಯ ಸುತ್ತುಮುತ್ತ ಆವರಿಸಿಕೊಂಡಿರುವ ಕಾಡು ಮಂಜಿನ ಮಳೆಯನಂತರ ಹೀಗೆ ಕಾಣುತ್ತಿತ್ತು.




























ಇದು ನಮ್ಮ ಮನೆಯಿರುವ ಮಹಡಿ.