Sunday, September 14, 2008

ಮತ್ತೊಮ್ಮೆ ನಯಾಗರಾ ದರ್ಶನ

ಕಳೆದ ತಿಂಗಳಲಲ್ಲಿ ೩ ದಿನ ರಜೆ ಕೂಡಿ ಬಂದಿರುವುದರಿಂದ ನನ್ನ ಕೆನಡಾ ಪ್ರವಾಸದಲ್ಲಿ ಮೂರನೇ ಬಾರಿ ನಯಾಗರಾ ಜಲಪಾತವನ್ನ ನೋಡುವ ಭಾಗ್ಯ ಸಿಕ್ಕಿತು. ಅನಂತ ಜಲರಾಶಿ ಭೋರ್ಗೆರೆಯುತ್ತಾ ನೆಲಕ್ಕೆ ಜಾರುವ ಸಂಭ್ರಮ ನಿಮ್ಮೊಡನೆ ಹಂಚಿಕೊಳ್ಳುವ ಆಶೆಯಿಂದ ಈ ಪುಟ ಬರೆಯುತ್ತಿದ್ದೇನೆ.

DSCN2736

ಇದು ಕೆನಡಾ ಭೂಭಾಗದಲ್ಲಿರುವ ನಯಾಗರಾ ಜಲಪಾತ. ಇದನ್ನ ಲಾಳ (Horse shoe) ಜಲಪಾತವೆಂದೂ ಕರೆಯುತ್ತಾರೆ. ಇದನ್ನ ನೌಕೆಯನ್ನು ಹತ್ತಿ ಹತ್ತಿರದಿಂದ ನೋಡುವ ವ್ಯವಸ್ಥೆಯಿದೆ.

DSCN2739

ಇದು ಅಮೆರಿಕಾ ದೇಶಕ್ಕೆ ಸೇರಿದ ಜಲಪಾತ. ಅಮೆರಿಕಾ ಪ್ರಜೆ ಈ ಜಲಪಾತದ ಪಕ್ಕದಿಂದ ಇಳಿಯುತ್ತಾ ನೋಡುವ ಅವಕಾಶವಿದೆ.

DSCN2751

ನೌಕೆಯಿಂದ ಲಾಳ ಜಲಪಾತದತ್ತ ಸಾಗುತ್ತಾ ಅಮೆರಿಕಾದ ಜಲಪಾತವನ್ನ ಫೋಟೋ ತೆಗೆದಿದ್ದೇನೆ. ಜಲಪಾತದಿಂದ ಹರಡಿದ ನೀರಿನ ಹನಿಗಳಲ್ಲಿ ಸುಂದರ ಕಾಮನಬಿಲ್ಲು ಮೂಡುತ್ತದೆ. ಇದು ನೋಡಲು ಬಹು ಚಂದ.

DSCN2753

ಜಲಪಾತವನ್ನ ಹತ್ತಿರದಿಂದ ನೋಡುತ್ತಾ  ಆನಂದಪಡುತ್ತಿರುವ ಅಮೆರಿಕಾದ ಜನ ಜಂಗುಳ.

DSCN2756

ಈಗ ಲಾಳ ಜಲಪಾತದ ಹತ್ತಿರ ಸೇರುತ್ತಿರುವ ನಮ್ಮ ನೌಕೆ. ನೌಕೆ ಎಷ್ಟು ಹತ್ತಿರ ಹೋಗುತ್ತದೆಂದರೆ, ಜಲಪಾತ ನಮ್ಮ ಮೇಲೆಯೇ ದುಮುಕುತ್ತಿದೆಯೇನೋ ಅನಿಸುತ್ತದೆ.

DSCN2763

ಜಲಪಾತದಿಂದ ಎಗಿರಿದ ನೀರಿನ ಹನಿಗಳು ನಮ್ಮ ಮೇಲೆ ಮಳೆಯಂತೆ ಸುರಿಯುತ್ತವೆ. ಅದಕ್ಕಾಗಿಯೇ ನಮಗೆಲ್ಲಾ plastic rain coats ಕೊಡುತ್ತಾರೆ. ಮೂರುಕಡೆಯಿಂದ ಆವರಿಸಿದ, ಭೋರ್ಗೆರೆಯುತ್ತಿರುವ ಅನಂತ ಜಲರಾಶಿಯನ್ನ ಬಣ್ಣಿಸಲು ಸಾಧ್ಯವಿಲ್ಲ. ಅಂಥಾ ಆನುಭೂತಿಯನ್ನ ಸವಿಯುತ್ತಿರುವ ನಮ್ಮ ಸಹ ಪಯನಿಗರು.

DSCN2776

DSCN2777

ಲಾಳೆಯ ಆಕಾರದಲ್ಲಿರುವ ಅಗಾಧದಲ್ಲಿ ದುಮುಕುತ್ತಿರುವ ಜಲರಾಶಿ. ಇದನ್ನೇ ನಾವು ನೌಕೆಯ ಮೂಲಕ ಹತ್ತಿರದಿಂದ ನೋಡಿದ್ದು.

DSCN2790

ಕತ್ತಲಾಗುತ್ತಿದ್ದಂತೆಯೇ ಜಲಪಾತದ ಮೇಲೆ ಬಣ್ಣಬಣ್ಣದ ಕಾಂತಿಯನ್ನ ವಿದ್ಯುದ್ದೀಪಗಳ ಮೂಲಕ ಪ್ರಸರಿಸುತ್ತಾರೆ. ರಂಗು ರಂಗಾಗಿ ಮೆರೆಯುತ್ತಿರುವ ನಯಾಗರಾ ಜಲಪಾತ. ಬಣ್ಣಗಳನ್ನ ಬದಲಿಸುತ್ತಿದ್ದಂತೆಯೇ ಜಲಪಾತ ಬಗೆಬಗೆಯ ಸೊಬಗನ್ನ ತೋರುತ್ತಾ ಮತ್ತೆ ಬರಲು ಕರೆಯುತ್ತಿದೆಯನಿಸುತ್ತೆ.

DSCN2792

DSCN2812

ಜಲಪಾತದ ಹತ್ತಿರವಿರುವ ಸ್ಕೈಲಾನ್ ಮಿನಾರದಿಂದ ಕಾಣಿಸುವ ನಯಾಗರಾ.

DSCN2819

DSCN2830

ನಿಮ್ಮ ಅನಿಸಿಕೆಗಳನ್ನ ತಪ್ಪದೆ ತಿಳಿಸಿ.

7 comments:

  1. ನಮ್ಮಂತ ಬಡಪಾಯಿಗಳಿಗೆ ಪುಕ್ಕಟೆ ನಯಾಗರಾ ನೋಡಿದಂತಾಯಿತು. ಧನ್ಯವಾದಗಳು...

    ReplyDelete
  2. really superb....
    fantastic photoghaphy...

    ReplyDelete
  3. ಸುಂದರ ಚಿತ್ರಗಳು

    ReplyDelete
  4. ನಿಜಕ್ಕೂ ಕಣ್ಮನ ಸೆಳೆಯುವ ಚಿತ್ರಗಳು. ಮುಂದಿನ ಸಲ ಚಿತ್ರಗಳ ಜೊತೆಗೆ ಇನ್ನಷ್ಟು ವಿವರಣೆ ನೀಡಿ ಬರೆಯಿರಿ.

    ReplyDelete
  5. @ಮಾಂಬಾಡಿ, @Shreedevi, @Ravikumar, @ಜೋಮನ್, @ಜಿತೇಂದ್ರ
    ನಿಮ್ಮ ಅನಿಸಿಕೆಯನ್ನ ಹಂಚಿಕೊಂಡಿದಕ್ಕೆ ನನ್ನ ಧನ್ಯವಾದಗಳು. ನನಗೆ ಕನ್ನಡದಲ್ಲಿ ಮತ್ತಷ್ಟು ಬರೆಯುವ ಹುಮ್ಮಸ್ಸು ನೀಡಿದಿರಿ. ಜಿತೇಂದ್ರವರು ಹೇಳಿದಂತೆ ಚಿತ್ರಗಳ ಜೊತೆ ಹೆಚ್ಚಿನ ಮಾಹಿತಿ ಒದಿಗಿಸಲು ಪ್ರಯತ್ನ ಮಾಡುತ್ತೆನೆ.

    ReplyDelete
  6. sir
    photos yella chennagi ide good photography
    illinda namage naigra falls nodu soubahgya sikkitu

    Thanks
    Pradeep

    ReplyDelete