Sunday, September 28, 2008

Marine Land ನೋಡೋಣ ಬణ్ణి

ಮೆರಿನ್ ಲ್ಯಾಂಡ್ ಎಂಬ ಈ ವಿಹಾರ ಸ್ಥಳ ನಯಾಗರಾ ಜಲಪಾತದ ಹತ್ತಿರವಿದೆ. ನಯಾಗರಾ ನೋಡಿದನಂತರ ತಪ್ಪದೇ ನೋಡಬೇಕಾದ ಸುಂದರ ಸ್ಥಳವಿದು. ಮಕ್ಕಳ ಮನರಂಜನೆಗಾಗಿ ಇಲ್ಲಿ ಬಗೆಬಗೆಯ ಆಟಗಳಿವೆ. ಇನ್ನು ದೊಡ್ಡವರಿಗಾಗಿ ಮೈ ಜುಮ್ಮೆನಿಸುವ ರೈಡ್ಸ್ ಗಳಿವೆ. ಎಲ್ಲಕ್ಕಿಂತ ಮಿಗಿಲಾಗಿ ಜಲಪ್ರಪಂಚದ ಅಚ್ಚರಿಗಳಾದ ಡಾಲ್ಫಿನ್ ಮೀನುಗಳು, ತಿಮಿಂಗಲಗಳು, ವಾಲ್ರಸ್, ಸೀಲ್ ಗಳನ್ನು ನೋಡ ಬಹುದು. ಅವುಗಳ ಕ್ರೀಡಾ ಪ್ರದರ್ಶನೆಯನ್ನ ಮರೆಯಲು ಸಾಧ್ಯವಿಲ್ಲ. ಇನ್ನೂ ಹೆಚ್ಚಿನ ವಿವರಗಳಿಗಾಗಿ ಈ ಪುಟವನ್ನ ನೋಡಿರಿ.

ಅಲ್ಲಿನ ಅನುಭವಗಳನ್ನ ಫೋಟೋಗಳಾಗಿ ಮತ್ತು ವೀಡಿಯೋಗಳ ರೂಪದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

DSCN2840 

ಇಲ್ಲಿ ತಿಮಿಂಗಲಗಳ ಪ್ರದರ್ಶನೆ ನಡೆಯುತ್ತದೆ. ನಿಗದಿತ ವೇಳೆಗಳಲ್ಲಿ ತಿಮಿಂಗಲಗಳ ಶಿಕ್ಷಕರು ಬಂದು ಪ್ರದರ್ಶನೆ ನೀಡಿಸುತ್ತಾರೆ.

DSCN2893

ಈ ಪ್ರದರ್ಶನೆಯಲ್ಲಿ ಒಂದು ಅಂಶವೇನೆಂದರೆ, ವೀಕ್ಷಕರ ಮೇಲೆ ನೀರು ಚಲ್ಲುವಂತೆ ತಿಮಿಂಗಲ ತನ್ನ ಬಾಲದಿಂದ ನೀರನ್ನು ಬಲವಾಗಿ ಬಡಿಯುವುದು. ಹೀಗೆ ನೀರನ್ನು ತನ್ನ ಬಾಲದಿಂದ ಬಡಿಯುತ್ತಿರುವ ತಿಮಿಂಗಲವನ್ನ ಮೇಲಿನ ಚಿತ್ರದಲ್ಲಿ ನೋಡಬಹುದು. ನೀರಿನಿಂದ ಮೇಲಕ್ಕೆ ಹಾರಿ ಗಿರಿಕಿ ಹೊಡೆಯುತ್ತಾ ಮತ್ತೆ ನೀರಿಗೆ ಬೀಳುವುದು ಮತ್ತೊಂದು ಮನರಂಜನೆಯ ಅಂಶ.

DSCN2842

ಪ್ರಸರ್ಶನೆಯನಂತರ ಆರಾಮಾಗಿ ಈಜುತ್ತಿರುವ ನಮ್ಮ ಗೆಳೆಯ.

DSCN2849

ಇಲ್ಲಿನ ನೀರಿನ ಕೊಳಗಳ ಪ್ರತ್ಯೇಕತೆ ಏನೆಂದರೆ, ಇವು ಎರೆಡು ಅಂತಸ್ತುಗಳಾಗಿ ನಿರ್ಮಿತವಾಗಿವೆ. ಮೇಲೆ ಸಾಧಾರಣ ಕೊಳದಂತೆ ಇದ್ದು, ಪ್ರದರ್ಶನೆಗೆ ಅನುಕೂಲವಾಗಿರುತ್ತವೆ. ಕೆಳಗಿನೆ ಅಂತಸ್ತು ಗಾಜಿನಿಂದ ನಿರ್ಮಿತವಾಗಿರುತ್ತದೆ. ಈ ಗಾಜಿನ ಮೂಲಕ ತಿಮಿಂಗಲಗಳ ಜೀವನವನ್ನ ಹತ್ತಿರದಿಂದ ಗಮನಿಸಬಹುದು. ಹಾಗೆ ತೆಗೆದ ಚಿತ್ರಗಳನ್ನ ಇಲ್ಲಿ ಇಡುತ್ತಿದ್ದೇನೆ.

DSCN2869

ಇದು ಬಿಳಿಯ ತಿಮಿಂಗಲ (Beluga Whale). ಇವು ಯಾವ ಪ್ರದರ್ಶನೆಯೂ ನೀಡಲಿಲ್ಲವಾದರೂ ನೋಡಲು ಸೋಜಿಗವೆನಿಸುತ್ತವೆ.

DSCN2872

DSCN2858

ಇನ್ನು ಯುವಜನರ ಮನರಂಜನೆಗಾಗಿ ಅನೇಕ ರೈಡ್ಸ್ ಇವೆ. ಇದು ಎಲ್ಲಾದಕ್ಕಿಂತ ಮುಖ್ಯವಾದದ್ದು. ಇದನ್ನ ಸ್ಕೈ ಸ್ಕ್ರೀಮರ್ ಎಂದು ಕರೆಯುತ್ತಾರೆ. ಇದನ್ನ ಹತ್ತಿ ಮೇಲಕ್ಕೆ ಹೋದರೆ, ಇಡೀ ನಯಾಗರಾ ಜಲಪಾತ ಕಾಣಿಸುತ್ತದೆಂದು ಹೇಳುತ್ತಾರೆ. ಆದರೆ ನಾವಂತೂ ಅದನ್ನ ನಿರ್ಧರಿಸಿಕೊಳ್ಳಲು ಆಗಲಿಲ್ಲ ಬಿಡಿ. ಯಾಕೆಂದರೆ ಅದನ್ನ ಹತ್ತುವ ಮುನ್ನ ಅದಿದ್ದ ಗುಡ್ಡವನ್ನ ಹತ್ತಬೇಕಾಗುವುದು. ನಮಗೆ ಅಷ್ಟು ಸಮಯವಿರಲಿಲ್ಲ. ನಮಗೆ ಡಾಲ್ಫಿನ್ ಪ್ರದರ್ಶನೆಗೆ ಸಮಯವಾಗುತ್ತಿರುವುದರಿಂದ ಮುನ್ನಡೆದೆವು. ಇದೊಂದಲ್ಲದೆ ಚಿಕ್ಕ ಮಕ್ಕಳಿಗೂ ಅನೇಕ ರೈಡ್ಸ್ ಗಳಿವೆ.

DSCN2879

DSCN2885

ಕೇವಲ ತಿಮಿಂಗಲಲ್ಲದೇ ಕರಡಿಗಳು, ಜಿಂಕೆಗಳು ಕೂಡಾ ಇವೆ. ಇಲ್ಲಿ ಜಿಂಕೆಗಳನ್ನ ಮುಟ್ಟುವುದಲ್ಲದೇ ಅವುಗಳಿಗೆ ಆಹಾರವನ್ನೂ ನೀಡಬಹುದು.

DSCN2903

ಇದು ಮರಿನ್ ಲ್ಯಾಂಡಿನ ಅತಿ ಮುಖ್ಯ ಆಕರ್ಷಣೆ. ಇದುವೇ ಕಿಂಗ್ ವಡಾರ್ಫ್ ಕ್ರಿಡಾಂಗಣ. ಡಾಲ್ಪಿನ್ ಗಳ ಪ್ರದರ್ಶನಾ ಸ್ಥಳ. ಬರೀ ಡಾಲ್ಫಿನ್ಗಳು ಮಾತ್ರವಲ್ಲದೇ  ಸೀಲ್ಸ್, ವಾಲ್ರಸಗಳು ಪ್ರದರ್ಶನೆಯಲ್ಲಿ ಭಾಗವಹಿಸುತ್ತವೆ.

DSCN2908

DSCN2923

ಇಲ್ಲಿ ಈ ಪ್ರದರ್ಶನೆಯ ವೀಡಿಯೋಗಳನ್ನ ಇಡುತ್ತಿದ್ದೇನೆ. ಇವುಗಳ ಗಾತ್ರ ಹೆಚ್ಚಿಗಿರುವುದರಿಂದ ಲೋಡ್ ಆಗುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಅದಕ್ಕೆ ನನ್ನ ಕ್ಷಮಾಪಣೆಗಳು.

ನೋಡಲು ಬಂದ ಪ್ರೇಕ್ಷಕರಿಂದ ಒಂದು ಮಗುವನ್ನ ಕರೆದು, ಆ ಮಗುವಿನೊಡನೆ ಒಂದು ಡಾಲ್ಫಿನ್ಗೆ ಸೂಚನೆಗಳನ್ನ ನೀಡಿಸಿ ಅದರೊಡನೆ ಕೆಲವು ಅಂಶಗಳನ್ನ ಪ್ರದರ್ಶಿಸುತ್ತಾರೆ. ಇದಾದನಂತರ ಆ ಮಗುವಿಗೆ ಒಂದು ಡಾಲ್ಫಿನ ಆಕಾರದ ಬಲೂನು ಕೊಡುತ್ತಾರೆ.

 

 

ಸಂಜೆಯವರಿಗೆ ಹೀಗೆ ಎಲ್ಲಾ ಪ್ರದರ್ಶನೆಗಳನ್ನ ನೋಡಿ, ಮನೆಗೆ ಹಿಂದಿರುಗೆದೆವು. ಅಂತೂ ನಮ್ಮ ಈ ವಿಹಾರ ಯಾತ್ರೆ ಹೇಗಿದೆಯೆಂದು ಹೇಳುತ್ತಿರಲ್ಲಾ

1 comment:

  1. ಓಹ್! ಚಿತ್ರಗಳೂ, ವಿಡಿಯೋಗಳು ತುಂಬಾ ಚೆನ್ನಾಗಿವೆ. ನಾವೂ ನಿಮ್ಮೊಂದಿಗೆ enjoy ಮಾಡಿದೆವು :)

    ReplyDelete